ಶಿಕ್ಷಕರ ಸೇವಾ ಸಮಿತಿ

ಸದಾ ಶೈಕ್ಷಣಿಕ ಸೇವೆಯಲ್ಲಿ .... by ಕುಮಾರ್ ಸೌರಕುಲ ex.CRP ರಾಮನಗರ, MA BEd
The Ultimate Educational Resource Center for Teachers, Students, Learners, Job Hunters and All..
ಇಲ್ಲಿನ ಶೈಕ್ಷಣಿಕ ಸಂಪನ್ಮೂಲಗಳು ಮಾದರಿಯಾಗಿವೆ. ಉಚಿತವಾಗಿ ಲಭ್ಯ.
ಹೆಸರು : ಚಿಕ್ಕವೀರಯ್ಯ ಟಿ.ಎನ್.
  ವೃತ್ತಿ : ಸಮೂಹ ಸಂಪನ್ಮೂಲ ವ್ಯಕ್ತಿ (CRP), ಶಾಲಾ ಶಿಕ್ಷಣ ಇಲಾಖೆ, ಬನ್ನಿಕುಪ್ಪೆ ಬಿ ಕ್ಲಸ್ಟರ್, ರಾಮನಗರ ತಾಲೂಕು
  ಸ್ವಂತ ಸ್ಥಳ : ತಾವರೆಕೆರೆ, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು ದಕ್ಷಿಣ ತಾಲೂಕು, ಬೆಂಗಳೂರು ನಗರ ಜಿಲ್ಲೆ
  ಜನ್ಮ ದಿನಾಂಕ : 01-05-1984
  ತಂದೆಯ ಹೆಸರು : ನಾಗರಾಜು
ತಾಯಿ ಹೆಸರು : ಈರಮ್ಮ
ಮಡದಿ : ದಿವ್ಯಾ ಪಿ.
ಮಕ್ಕಳು : ಜ್ಞಾನ ಮತ್ತು ಅಕ್ಷರ
ವಿದ್ಯಾರ್ಹತೆ : ಶಿಕ್ಷಕ ತರಬೇತಿ(TCH/Ded), ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ರಾಜಾಜಿನಗರ, ಬೆಂಗಳೂರು ಹಾಗೂ”ಕನ್ನಡ” ವಿಷಯದಲ್ಲಿ ಸ್ನಾತಕೋತ್ತರ ಪದವಿ ಬೆಂಗಳೂರು ವಿಶ್ವವಿದ್ಯಾನಿಲಯ
ಸೇವಾ ಕ್ಷೇತ್ರಗಳು :
ಶಿಕ್ಷಣ, , ಸಮುದಾಯ ಅಭಿವೃದ್ಧಿ, , ಮಕ್ಕಳ ಅಭಿವೃದ್ದಿ, ಸುಸ್ಥಿರ ಶೈಕ್ಷಣಿಕ ಅಭಿವೃದ್ಧಿ, ಪರಿಸರ ಕಾಳಜಿ ಗಮನ ಸೆಳೆಯುವ ಕಾರ್ಯಗಳು

01.ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಬನ್ನಿಕುಪ್ಪೆ ಬಿ ಕ್ಲಸ್ಟರ್ ವ್ಯಾಪ್ತಿಗೆ ಒಳಪಡುವ 14 ಸರ್ಕಾರಿ ಶಾಲೆಗಳಿಗೆ ಕಳೆದ ಎರಡು ಶೈಕ್ಷಣಿಕ ವರ್ಷಗಳಿಂದ ಬನ್ನಿಕುಪ್ಪೆ ಬಿ ಗ್ರಾಮ ಪಂಚಾಯಿತಿ, ಶ್ರೀ ಗಾಣಕಲ್‌ ನಟರಾಜು ರವರು, ಶಿಕ್ಷಕರು ಹಾಗೂ ದಾನಿಗಳ ಸಹಕಾರದಿಂದ ಮಧ್ಯಾಹ್ನದ ಬಿಸಿ ಊಟಕ್ಕೆ ಪ್ರತಿನಿತ್ಯ ತಾಜಾ ತರಕಾರಿ ನೀಡುವ ರಾಜ್ಯದ ಗಮನ ಸೆಳೆದ “ಉಚಿತ ತರಕಾರಿ ಅಕ್ಷಯ ಪಾತ್ರೆ ಯೋಜನೆ” ಜಾರಿಗೆ… ಇಂದಿಗೂ ಜಾರಿಯಲ್ಲಿದೆ.

02. ಮೊಬೈಲ್ ಬಿಡಿ ಪುಸ್ತಕ ಹಿಡಿ ಅರಿವಿನ ಕಾರ್ಯಕ್ರಮ.. ಕೇವಲ ಎರಡು ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ರಾಜ್ಯಾದ್ಯಂತ ವೀಕ್ಷಿಸಿರುವ ಕಾರ್ಯಕ್ರಮ. ಸರ್ಕಾರಿ ಶಾಲಾ ಮಕ್ಕಳಲ್ಲಿ, ಪೋಷಕರಲ್ಲಿ, ಸಮುದಾಯದಲ್ಲಿ ಮೊಬೈಲ್ ಬಳಸುವ ಪ್ರಮಾಣವನ್ನು ಕಡಿಮೆ ಮಾಡಲು, ಪುಸ್ತಕ ಓದುವ ಅಭಿರುಚಿ ಬೆಳೆಸಲು ವಿಶೇಷ ಸಮಯವನ್ನು ಮೀಸಲಿಟ್ಟು, ಅರಿವು ಮೂಡಿಸುವ ಕಾರ್ಯಕ್ರಮ..

03.ಹಕ್ಕಿಪಿಕ್ಕಿ ಸಮುದಾಯದ ಶಾಲೆ ಬಿಟ್ಟ ಮಕ್ಕಳಿಗಾಗಿ ರಾಮನಗರ ತಾಲೂಕಿನ ಬನ್ನಿಕುಪ್ಪೆ ಬಿ ಕ್ಲಸ್ಟರ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಕಲಿಕಾ ಕೇಂದ್ರವನ್ನು ತೆರೆದು ಇಪ್ಪತ್ತಕ್ಕೂ ಅಧಿಕ ಮಕ್ಕಳನ್ನು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತರಬೇತಿಗೊಳಿಸಿ. ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾಗಿ, ನಂತರ ಹಕಿ ಮಕ್ಕಳನ್ನು ಕಾಲೇಜು ಸೇರಿಸಲಾಯಿತು.

04 ರಾಜ್ಯದಲ್ಲೇ ಪ್ರಪ್ರಥಮವಾಗಿ ಹುತಾತ್ಮ ಕಾರ್ಗಿಲ್ ವೀರ ಯೋಧರ ಹೆಸರಿನಲ್ಲಿ ಗಿಡ ನೆಟ್ಟು, ಬನ್ನಿಕುಪ್ಪೆ ಬಿ ಕ್ಲಸ್ಟರ್ ಕೇಂದ್ರದಲ್ಲಿ ಕಾರ್ಗಿಲ್ ವೀರಯೋಧ ವನ ನಿರ್ಮಾಣ..

05.ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ, ಸಮುದಾಯದಲ್ಲಿ, ಓದುವ ಅಭಿವೃದ್ಧಿ ಹೆಚ್ಚಿಸಲು, ಹಾಗೂ ಮೊಬೈಲ್ ಬಳಕೆ ಪ್ರಮಾಣವನ್ನು ತಗ್ಗಿಸಲು, ಪ್ರತಿ ಶನಿವಾರ ಶಾಲಾ ಅವಧಿಯ ನಂತರ, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ
“ಮೊಬೈಲ್ ಬಿಡಿ ಪುಸ್ತಕ ಹಿಡಿ” ರಾಜ್ಯದಲ್ಲೇ ಪ್ರಪ್ರಥಮವಾಗಿ ಕಾರ್ಯಕ್ರಮ ಆರಂಭ…

06.ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಶಿಕ್ಷಕರಿಗಾಗಿ ಗ್ರಂಥಾಲಯ ಮತ್ತು ಬನ್ನಿಕುಪ್ಪೆ ಬಿ ಕ್ಲಸ್ಟರ್ ನ ಎಲ್ಲಾ 14 ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗಾಗಿ ಗ್ರಂಥಾಲಯ ಆರಂಭ..

07.ರಾಮನಗರ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಶಿಕ್ಷಕರಿಗೆ ಕಲಿಕಾ ಸಾಮಗ್ರಿ, ಹಾಗೂ ಚಟುವಟಿಕೆ ಆಧಾರಿತ ಬೋಧನೆಗಾಗಿ ಶಿಕ್ಷಕ ಅಭಿವೃದ್ಧಿ ಕೇಂದ್ರವನ್ನು ಬನ್ನಿಕುಪ್ಪೆ ಬಿ ಕ್ಲಸ್ಟರ್ ಕೇಂದ್ರದಲ್ಲಿ ಆರಂಭ..

08.ರಾಮನಗರ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಸರ್ಕಾರಿ ಶಾಲೆಗಳಿಗೆ ಈ ಖಾತ ಮಾಡಿಸಿ ಈ ಸ್ವತ್ತು ಮಾಡಿಸಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸರಕಾರಿ ಶಾಲೆಗಳ ಆಸ್ತಿ ಸಂರಕ್ಷಣೆ..

09. ಸರ್ಕಾರಿ ಶಾಲಾ ಆವಿದ್ಯಾರ್ಥಿಗಳ ವಿದ್ಯಾರ್ಥಿಗಳ ವೈಜ್ಞಾನಿಕ ಮನೋಭಾವ ಹೆಚ್ಚಿಸಲು ಬಯೋ ಪಾರ್ಕ್ ಗಳ ನಿರ್ಮಾಣ, ಇದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು, ಸರ್ಕಾರಿ ಶಾಲೆಗಳಲ್ಲಿ ಪಪ್ಪಾಯ ಮತ್ತು ನುಗ್ಗಿ ಸೊಪ್ಪಿನ ಗಿಡಗಳ ಅಭಿವೃದ್ಧಿ.

10. ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಆಕಾಶ ಕಾಯಗಳ ವೀಕ್ಷಣೆಗೆ ಪೂರಕವಾಗಿ ಜೆ ಟಿ ಡಿ ಫೌಂಡೇಶನ್ ರವರ ಸಹಕಾರ ಪಡೆದು, ನೂತನ ದೂರದರ್ಶಕವನ್ನು ಕೊಂಡುಕೊಂಡು, ತರಬೇತಿ ನೀಡಿ, ಆಕಾಶ ಕಾಯಗಳನ್ನು ವೀಕ್ಷಿಸಲಾಗುತ್ತಿದೆ.

11 ಬನ್ನಿಕುಪ್ಪೆ ಬಿ ಕ್ಲಸ್ಟರ್ ನ ಎಲ್ಲಾ 14 ಸರ್ಕಾರಿ ಶಾಲೆಗಳಲ್ಲಿ ನೂತನವಾಗಿ ದಾಖಲಾದ ವಿದ್ಯಾರ್ಥಿಗಳ ಹೆಸರಿನಲ್ಲಿ, ಗಿಡ ನೆಡುವ ಮೂಲಕ ಪರಿಸರಕ್ಕೆ ಕಾಣಿಕೆ. ಇದರ ಜೊತೆಗೆ ಯಾವುದೇ ಕಾರ್ಯಕ್ರಮದಲ್ಲೂ, ಹಾರ, ಶಾಲುಗಳ ಬಳಸದೆ, ಕಡ್ಡಾಯವಾಗಿ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ, ಪುಸ್ತಕ ಮತ್ತು ಗಿಡಗಳ ನೀಡುವ ಕಾರ್ಯಕ್ರಮ.

12. ಪೋಷಕರ ಆಂಗ್ಲಭಾಷಾ ವ್ಯಾಮೋಹದಿಂದಾಗಿ ಸರ್ಕಾರಿ ಶಾಲೆ ಮಕ್ಕಳು, ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುಬೇಕಾದರೆ, ಬನ್ನಿಕುಪ್ಪೆ ಬಿ ಕ್ಲಸ್ಟರ್ ಆಯ್ದ ಕೆಲವು ಶಾಲೆಗಳಿಗೆ, ಸೇವಾ ಸಂಸ್ಥೆಗಳ ಸಹಕಾರ ಪಡೆದು, ಆಂಗ್ಲ ಭಾಷೆಯ ಕಲಿಸಲು ಶಿಕ್ಷಕರ ನೇಮಕ.
13. ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು.

ಇದುವರೆಗೂ ಬಂದಿರುವ ಪ್ರಶಸ್ತಿಗಳು
01. ಶೈಕ್ಷಣಿಕ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ಟೊಯೋಟೊ ಕಿರ್ಲೋಸ್ಕರ್ ಸಂಸ್ಥೆಯ ವತಿಯಿಂದ ಪ್ರತಿಷ್ಠಿತ ಟೊಯೋಟೊ ಚೇತನ ಪುರಸ್ಕಾರ 2024.
02. ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ಸೇವೆಗಾಗಿ ಸಮತ್ವ ಟ್ರಸ್ ಚಾಮರಾಜನಗರ ಜಿಲ್ಲೆಯ ವತಿಯಿಂದ ಬೆಸ್ಟ್ ಟೀಚರ್ ಅವಾರ್ಡ.
03. ರೋಟರಿ ಕ್ಲಬ್ ವತಿಯಿಂದ ನೇಷನ್ ಬಿಲ್ಡರ್ ಅವಾರ್ಡ್
04 ಅಕ್ಷರ ಫೌಂಡೇಶನ್ ವತಿಯಿಂದ ಪ್ರತಿಬಿಂಬ ಪಾಡ್ ಕಾಸ್ಟ್ ನಾವಿನ್ಯತೆಯುಳ್ಳ ಶೈಕ್ಷಣಿಕ ಪ್ರಯೋಗಗಳಿಗಾಗಿ ಸಮಾಜಮುಖಿ ಶಿಕ್ಷಕ ಪ್ರಶಸ್ತಿ.
05. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ರಾಮನಗರ ಶಿಕ್ಷಣ ಇಲಾಖೆಯ ವತಿಯಿಂದ “ಬೆಸ್ಟ್ ಪ್ರಾಕ್ಟೀಸ್ CRP ಅವಾರ್ಡ್”
06. ಮಾಗಡಿ ತಾಲೂಕು ಆಡಳಿತ ಮಂಡಳಿಯ ಪ್ರಶಸ್ತಿ “ರಾಜ್ಯೋತ್ಸವ ಪ್ರಶಸ್ತಿ”.
07. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ ಜಿಲ್ಲೆಯ ವತಿಯಿಂದ “ಸರ್ವಜ್ಞ ಪ್ರಶಸ್ತಿ”
ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ಅಭಿನಂದನಾ ಪತ್ರಗಳು
A. ಸ್ವಾಮಿ ವಿವೇಕಾನಂದ ಜಯಂತಿಯಲ್ಲಿ
ಭಾಗವಹಿಸಿದ್ದಕ್ಕಾಗಿ, ಬೆಂಗಳೂರಿನ ಆರ್‌ಸಿ ಕಾಲೇಜು ವತಿಯಿಂದ ಅಭಿನಂದನ ಪತ್ರ.
B. ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಪಾರಂಪರಿಕ ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವತಿಯಿಂದ ಅಭಿನಂದನ ಪತ್ರ.
C. ಮದ್ದೂರಿನ ತಾಲೂಕು ಪಂಚಾಯಿತಿ ಮತ್ತು ಸಂವಿಧಾನ ರಕ್ಷಣಾ ವೇದಿಕೆ ವತಿಯಿಂದ ಅಭಿನಂದನ ಪತ್ರ..
ಇನ್ನು ಹಲವಾರು ಸೇವಾ ಸಂಸ್ಥೆಗಳಿಂದ ಅಭಿನಂದನ ಪತ್ರ..

Phone number : 9844580580

ವೀಡೀಯೋ ವರದಿಗಳು, ಟಿವಿ ಮಾಧ್ಯಮ ವರದಿಗಳು
ವೀಡೀಯೋ ವರದಿಗಳು, ಟಿವಿ ಮಾಧ್ಯಮ ವರದಿಗಳು
ವೀಡೀಯೋ ವರದಿಗಳು, ಟಿವಿ ಮಾಧ್ಯಮ ವರದಿಗಳು
ಅಭಿಯಾನ ವೀಡೀಯೋ ವರದಿಗಳು
ವೀಡೀಯೋ ವರದಿಗಳು, ಟಿವಿ ಮಾಧ್ಯಮ ವರದಿಗಳು
ಅಭಿಯಾನ ವೀಡೀಯೋ ವರದಿಗಳು
ಪತ್ರಿಕಾ ಪ್ರಕಟಣೆಗಳು, ವರದಿಗಳು
ವಿಶ್ವವಿದ್ಯಾಲಯ ಪ್ರಕಟಣೆಗಳು, ಅಭಿನಂದನೆಗಳು.
ಶೈಕ್ಷಣಿಕ ಕಾರ್ಯಕ್ಷೇತ್ರದಲ್ಲಿ
ಅಭಿನಂದನೆಗಳು.