ಶಿಕ್ಷಕರ ಸೇವಾ ಸಮಿತಿ

ಶಿಕ್ಷಕರ ಸೇವಾ ಸಮಿತಿ
ಸದಾ ಶೈಕ್ಷಣಿಕ ಸೇವೆಯಲ್ಲಿ .... by ಕುಮಾರ್ ಸೌರಕುಲ ex.CRP ರಾಮನಗರ, MA BEd
The Ultimate Educational Resource Center for Teachers, Students, Learners, Job Hunters and All..
ಇಲ್ಲಿನ ಶೈಕ್ಷಣಿಕ ಸಂಪನ್ಮೂಲಗಳು ಮಾದರಿಯಾಗಿವೆ. ಉಚಿತವಾಗಿ ಲಭ್ಯ.

ಸ್ವಾತಂತ್ರ್ಯೋತ್ಸವ

            ಭಾರತ ದೇಶ 1947 ಆಗಸ್ಟ್ 15 ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.  ದೇಶದಲ್ಲೆಲ್ಲಾ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ ಹಾಡಿ, ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ.
ಸ್ವಾತಂತ್ರ್ಯೋತ್ಸವದಂದು ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನಶಿಲ್ಪಿ ಭಾರತರತ್ನ ಅಂಬೇಡ್ಕರ್ ರವರ ಪೊಟೋ ಇಡುವ ಬಗ್ಗೆ ಜ್ಞಾಪನ
ಶಾಲಾ ಮಕ್ಕಳಿಗಾಗಿ ಕಿರು ಭಾಷಣಗಳು (ಮಾದರಿ)