ಶೈಕ್ಷಣಿಕ ಪ್ರವಾಸ
ಶೈಕ್ಷಣಿಕ ಪ್ರವಾಸ ಹೆಸರೇ ಹೇಳುವಂತೆ, ಮಕ್ಕಳಿಗೆ ನಿತ್ಯದ ಶಾಲಾ ವಾತಾವರಣದಿಂದ ಹೊರ ಕರೆತಂದು, ಅವರಿಗೆ ಒಂದು ಆಕರ್ಷಣೀಯ ರೀತಿಯಲ್ಲಿ ಪಠ್ಯಕ್ಕೆ ಸಂಬಂಧಿಸಿದಂತೆ ಹಾಗೂ ಇನ್ನಿತರ ಹೆಚ್ಚಿನ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಡುವುದು. ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿತದ್ದನ್ನು ಪ್ರಾಯೋಗಿಕವಾಗಿ ಅನ್ವೇಷಿಸಲು ಮತ್ತು ಅನುಭವಿಸಲು ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು “ಅಭ್ಯಾಸದ ಮೂಲಕ ಹೊಸ ಒಳನೋಟಗಳನ್ನು ಕಂಡುಹಿಡಿಯುವುದು” ಎಂಬ ವಿಷಯವನ್ನು ಈ ಪ್ರವಾಸವು ಆಧರಿಸಿದೆ.
