SDMC
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ
ಸಮುದಾಯದ ಮಾಲೀಕತ್ವವನ್ನು ಖಚಿತಪಡಿಸಿಕೊಳ್ಳಲು ಮತ್ತು ಶಿಕ್ಷಣದಲ್ಲಿ ಸಮುದಾಯದ ಭಾಗವಹಿಸುವಿಕೆಗಾಗಿ ಸರ್ಕಾರವು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಹೊಂದುವ ಈ ವ್ಯವಸ್ಥೆಯನ್ನು ವಿರಚಿಸಿದೆ. ಸದರಿ ಸಮಿತಿಯಲ್ಲಿ ಇತರರನ್ನು ಹೊರತುಪಡಿಸಿ 18 ಮುಖ್ಯ ಸದಸ್ಯರು ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೋಷಕರಾಗಿರುತ್ತಾರೆ.
ಶಾಲೆಗಳ ಉತ್ತಮ ನಿರ್ವಹಣೆಗಾಗಿ ಶೈಕ್ಷಣಿಕ ಮತ್ತು ಶಾಲಾಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳಲು ಎಸ್.ಡಿ.ಎಂ.ಸಿ. ಸಮಿತಿಗಳಿಗೆ ಕೆಲವು ಕರ್ತವ್ಯಗಳನ್ನು ಹಾಗೂ ಅಗತ್ಯ ಅಧಿಕಾರಗಳನ್ನು ನೀಡಲಾಗಿದೆ. ಶಾಲೆಯ ಮುಖ್ಯ ಶಿಕ್ಷಕರು ಸಮಿತಿಯ ಕಾರ್ಯದರ್ಶಿಗಳಾಗಿರುತ್ತಾರೆ. ಪ್ರಸ್ತುತ ವ್ಯವಸ್ಥೆಯನ್ನು ಸರ್ಕಾರದ ಕಾರ್ಯಕಾರಿ ಆದೇಶದನ್ವಯ ನಿರ್ವಹಿಸಲಾಗುತ್ತಿದೆ.
SDMC ಕುರಿತ ಸರ್ಕಾರದ ನಡಾವಳಿಗಳು ....
ಎಸ್.ಡಿ.ಎಂ.ಸಿ. ಗೆ ಸಂಬಂಧಿಸಿದಂತೆ 2001 ರಿಂದ ಇಲ್ಲಿಯವರೆಗಿನ ಕರ್ನಾಟಕ ಸಕಾರದ ಎಲ್ಲಾ ನಡಾವಳಿಗಳನ್ನು ಒಳಗೊಂಡಿರುವ ಆದೇಶಗಳು ಇದರಲ್ಲಿದ್ದು …ಒಮ್ಮೆ ಓದಿರಿ.
SDMC ಕುರಿತ ಇಲಾಖಾ ಆದೇಶಗಳು ....
ಎಸ್.ಡಿ.ಎಂ.ಸಿ. ಗೆ ಸಂಬಂಧಿಸಿದಂತೆ ಇಲ್ಲಿಯವರೆಗಿನ ಇಲಾಖಾ ಸುತ್ತೋಲೆ ಆದೇಶಗಳಿದ್ದು, …ಒಮ್ಮೆ ಓದಿರಿ.
SDMC ರಚನೆಯಾಗದ ಶಾಲೆಗಳಲ್ಲಿ ರಚಿಸುವ ಬಗ್ಗೆ
ಎಸ್.ಡಿ.ಎಂ.ಸಿ. ರಚನೆಯಾಗದ ಶಾಲೆಗಳಲ್ಲಿ SDMC ರಚಿಸುವ ಬಗ್ಗೆ ಇಲಾಖಾ ಆದೇಶ : ದಿನಾಂಕ – 20-12-2023
ತರಬೇತಿ ಸಾಹಿತ್ಯ - ಸಮಗ್ರ 2020-21
ಎಸ್.ಡಿ.ಎಂ.ಸಿ. ಸದಸ್ಯರ ತರಬೇತಿ ಸಾಹಿತ್ಯ ಇದಾಗಿದ್ದು, ಎಚ್ಚರಿಕೆಯಿಂದ ಓದಿರಿ.
ತರಬೇತಿ ಸಾಹಿತ್ಯ - ಸಮಗ್ರ 2019-20
ಎಸ್.ಡಿ.ಎಂ.ಸಿ. ಸದಸ್ಯರ ತರಬೇತಿ ಸಾಹಿತ್ಯ ಇದಾಗಿದ್ದು, ಎಚ್ಚರಿಕೆಯಿಂದ ಓದಿರಿ.
SDMC ಸಭೆಗೆ ಪೋಷಕರಿಗೆ ಆಹ್ವಾನ ಪತ್ರ
SDMC ಸಭೆಗೆ ಮಗುವಿನ ಪೋಷಕರನ್ನು ಆಹ್ವಾನಿಸುವ ಬಗ್ಗೆ. ಸದರಿ ಸಭೆಯ ಸಂಖ್ಯೆ ಹಾಗೂ ದಿನಾಂಕ ನಮೂದಿಸಿ ಜೊತೆಗೆ ಕರೆಯೋಲೆ ಸಂಖ್ಯೆ ನಮೂದಿಸಿ
SDMC ಸಭೆಗೆ ಅಧಿಕಾರಿಗಳಿಗೆ ಮೇಲ್ವಿಚಾರಣೆ ಮಾಡಲು ಆಹ್ವಾನ ಪತ್ರ
SDMC ಸಭೆಗೆ ಇಲಾಖಾ ಅಧಿಕಾರಿಗಳನ್ನು ಆಹ್ವಾನಿಸುವ ಬಗ್ಗೆ. ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ನೀಡುವುದು. ಈ ಸಭೆಯ ಮೇಲ್ವಿಚಾರಣೆ ಮಾಡುವಂತೆ ಹಾಗೂ ಮಾರ್ಗದರ್ಶನ ಕೋರಿ ….
SDMC ಸಭೆಯಲ್ಲಿ ಹೊಸ ಅಧ್ಯಕ್ಷರನ್ನು ನೇಮಕಮಾಡಿಕೊಂಡ ಬಗ್ಗೆ ಸ್ಥಳಿಯ ಸಂಸ್ಥೆಯ ಗಮನಕ್ಕೆ ತರುವ ಬಗ್ಗೆ
SDMC ಸಭೆಗೆ ಇಲಾಖಾ ಅಧಿಕಾರಿಗಳನ್ನು ಆಹ್ವಾನಿಸುವ ಬಗ್ಗೆ. ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ನೀಡುವುದು. ಈ ಸಭೆಯ ಮೇಲ್ವಿಚಾರಣೆ ಮಾಡುವಂತೆ ಹಾಗೂ ಮಾರ್ಗದರ್ಶನ ಕೋರಿ ….
SDMC ಖಾತೆಯಲ್ಲಿ ವ್ಯವಹರಿಸಲು ಅಧ್ಯಕ್ಷರ ಹೆಸರು ಮತ್ತು ಮಾದರಿ ಸಹಿಯ ದೃಢೀಕರಣದ ಬಗ್ಗೆ
SDMC ಹೊಸ ಅಧ್ಯಕ್ಷರ ನೇಮಕಾತಿ ಮಾಡಿಕೊಂಡ ಮೇಲೆ ಬ್ಯಾಂಕ್ ವ್ಯವಹಾರಕ್ಕಾಗಿ ಹೆಸರು ಮತ್ತು ಮಾದರಿ ಸಹಿಯ ದೃಢೀಕರಣ ಪಡೆಯಲು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಬರೆಯುವ ಬಗ್ಗೆ,…. ನಂತರ ಬ್ಯಾಂಕಿಗೆ ನೀಡುವುದು.
SDMC ಖಾತೆಯಲ್ಲಿ ವ್ಯವಹರಿಸಲು ಮುಖ್ಯಶಿಕ್ಷಕರ ಹೆಸರು ಮತ್ತು ಮಾದರಿ ಸಹಿಯ ದೃಢೀಕರಣದ ಬಗ್ಗೆ
SDMC ಬ್ಯಾಂಕ್ ವ್ಯವಹಾರಕ್ಕಾಗಿ ಮುಖ್ಯಶಿಕ್ಷಕರ ಹೆಸರು ಮತ್ತು ಮಾದರಿ ಸಹಿಯ ದೃಢೀಕರಣ ಪಡೆಯಲು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಬರೆಯುವ ಬಗ್ಗೆ,…. ನಂತರ ಬ್ಯಾಂಕಿಗೆ ನೀಡುವುದು.