ಶ್ರೀ ಚಿಕ್ಕವೀರಯ್ಯ ಟಿ.ಎನ್.
ಸಿ.ಆರ್.ಪಿ., ಶಾಲಾ ಶಿಕ್ಷಣ ಇಲಾಖೆ, ರಾಮನಗರ ತಾಲ್ಲೂಕು
"ಮೊಬೈಲ್ ಬಿಡಿ - ಪುಸ್ತಕ ಹಿಡಿ" ಅಭಿಯಾನದ ಜನಕರಾದ ಶ್ರೀ ಚಿಕ್ಕವೀರಯ್ಯ ಸಿ.ಆರ್.ಪಿ., ರಾಮನಗರ ರವರಿಗೆ ಅಭಿನಂದನೆಗಳು. ಈ ಅಭಿಯಾನ ಇಂದು ಇಲಾಖೆಯ ಆಶಯವೂ ಹೌದು. ಮಾನ್ಯ ಶಾಸಕರು, ಮಾನ್ಯ ಶಿಕ್ಷಣ ಮಂತ್ರಿಗಳು, ಮಾಧ್ಯಮಗಳು, ಅಧಿಕಾರಿಗಳು, ಪೋಷಕರಾಧಿಯಾಗಿ ಎಲ್ಲರೂ ಮೆಚ್ಚುಗೆಯ ಮಳೆಯನ್ನೇ ಸುರಿಸಿದ್ದಾರೆ. ಈಗ ತುಮಕೂರು ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯ ಕಾಲೇಜು ಮಕ್ಕಳಿಗೆ ಮೊಬೈಲ್ ಬಿಡಿ - ಪುಸ್ತಕ ಹಿಡಿ ಈ ಪಾಠ ಕಲಿಸಲು ಹೊರಟಿದೆ. ನಾವೂ ಕೂಡ ಶ್ರೀ ಚಿಕ್ಕವೀರಯ್ಯರವರ ಈ ಅಭಿಯಾನಕ್ಕೆ ತಲೆಬಾಗೋಣ, ತಲೆ ತೂಗೋಣ, ಮುದ್ದು ಮಕ್ಕಳ ತಲೆ ಉಳಿಸೋಣ. ಸಂಪರ್ಕಿಸಿ : 9844580580